ಅಕ್ಷರ ಕೃಷಿಯಲ್ಲಿ...



ಅಕ್ಷರ ಕೃಷಿ

  • ಪ್ರಕಟಣೆಗಳು:
  • ೨೦೧೦ರಲ್ಲಿ `ಹುರಿದುಂಬಿ' ವಿವಿಧ ಪ್ರಕಟಿತ ಲೇಖನಗಳ ಸಂಗ್ರಹ ಪ್ರಕಟ.
  • ೨೦೧೦ರಲ್ಲಿ `ಉಕ್ಕೆಕಾಯಿ' ಚೊಚ್ಚಲ ಕವನ ಸಂಕಲನ ಪ್ರಕಟ.
  • ನಾಟಕ ಕೃತಿ ಸಿಂಗಾರಿತ್ಲುಗೆ 2006ನೇ ಸಾಲಿನ ಕಸಾಪ ದತ್ತಿ `ಅರಳು' ಪ್ರಶಸ್ತಿ.
  • `ಸಿಂಗಾರಿತ್ಲು ' ನಾಟಕ 2006ರಲ್ಲಿ ಪ್ರಕಟ.
  • ಪುಸ್ತಕ ಪ್ರಾಧಿಕಾರ ಲೇಖಕರ ಚೊಚ್ಚಲ ಕೃತಿಗೆ ನೀಡುವ ಸಹಾಯಧನಕ್ಕೆ `ಸಿಂಗಾರಿತ್ಲು' ನಾಟಕ ಆಯ್ಕೆ.
  • ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ರಾಜ್ಯಮಟ್ಟದ ಕಾವ್ಯ ಸ್ಪರ್ಧೆಗಳಲ್ಲಿ ಸತತ 1998, 1999, 2000ನೇ ಸಾಲುಗಳಲ್ಲಿ ಬಹುಮಾನ.
  • ಕನ್ನಡ ಸಾಹಿತ್ಯ ಅಕಾಡೆಮಿ 1998ರಲ್ಲಿ ಪ್ರಕಟಿಸಿದ `ಯುವ ಕಾವ್ಯ'ದಲ್ಲಿ ಕವನ ಸೇರ್ಪಡೆ.
  • ಕನ್ನಡ ಸಾಹಿತ್ಯ ಅಕಾಡೆಮಿ 1999ರಲ್ಲಿ ಪ್ರಕಟಿಸಿದ `ಯುವ ಕಥೆ 'ಯಲ್ಲಿ `ಸಿಂಗಾರಿತ್ಲು' ಕಥೆಗೆ ಸ್ಥಾನ.
  • 19 ವರ್ಷದೊಳಗಿನ ಯುವ ಕವಿಗಳಿಗೆ ಹೊಸದಿಲ್ಲಿಯ `ಪೊಯೆಟ್ರಿ ಸೊಸೈಟಿ ಆಫ್ ಇಂಡಿಯಾ' ಸಂಸ್ಥೆ 1994ರಲ್ಲಿ ಮೈಸೂರಿನಲ್ಲಿ ನಡೆಸಿದ ಕಾವ್ಯ ಕಮ್ಮಟಕ್ಕೆ ಆಯ್ಕೆ. ಇದೇ ಸಂಸ್ಥೆ ಹೊರತಂದ `ಹದಿ ಹೆಜ್ಜೆ' ಎಂಬ ಕನ್ನಡ ಮತ್ತು ಇಂಗ್ಲಿಷ್ ಕವನ ಸಂಕಲನಗಳಲ್ಲಿ ಕವನಗಳು ಸೇರಿವೆ.
  • ಬೆಂಗಳೂರು ಆಕಾಶವಾಣಿಯಿಂದ ಕವನಗಳ ಪ್ರಸಾರ.
  • ಚಂದ್ರಶೇಖರ ಪಾಟೀಲರ `ಸಂಕ್ರಮಣ 'ದ ವಾರ್ಷಿಕ ಚುಟುಕು ಕವನ ಸ್ಪರ್ಧೆಯಲ್ಲಿ ಬಹುಮಾನ.
  • ಮಠಗಳ ಬಗ್ಗೆ ಸಂದರ್ಶನವನ್ನಾಧರಿಸಿದ `ಮಠ ಕಟ್ಟಿ ನೋಡು ' ಲೇಖನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ 'ನ ಪುಸ್ತಕದಲ್ಲಿ ಸೇರ್ಪಡೆ.
  • ವಿಕ್ರಾಂತ ಕರ್ನಾಟಕ, ಇಂಡಿಯಾ ಇನೋ ಡಾಟ್ ಕಾಂ, ಟೈಮ್ಸ್ ಆಫ್ ಇಂಡಿಯಾದ ಇಂಟರ್ನೆಟ್, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಕನ್ನಡಪ್ರಭ, ವಿಜಯ ಕರ್ನಾಟಕ, ಪ್ರಜಾಪ್ರಗತಿ, ಸಂಕ್ರಮಣ, ತರಂಗ, ಮಲ್ಲಿಗೆ ಪತ್ರಿಕೆಗಳಲ್ಲಿ ಕವನ, ಲೇಖನಗಳು ಪ್ರಕಟಗೊಂಡಿವೆ.