೨೦೧೦ರಲ್ಲಿ `ಹುರಿದುಂಬಿ' ವಿವಿಧ ಪ್ರಕಟಿತ ಲೇಖನಗಳ ಸಂಗ್ರಹ ಪ್ರಕಟ.
೨೦೧೦ರಲ್ಲಿ `ಉಕ್ಕೆಕಾಯಿ' ಚೊಚ್ಚಲ ಕವನ ಸಂಕಲನ ಪ್ರಕಟ.
ನಾಟಕ ಕೃತಿ ಸಿಂಗಾರಿತ್ಲುಗೆ 2006ನೇ ಸಾಲಿನ ಕಸಾಪ ದತ್ತಿ `ಅರಳು' ಪ್ರಶಸ್ತಿ.
`ಸಿಂಗಾರಿತ್ಲು ' ನಾಟಕ 2006ರಲ್ಲಿ ಪ್ರಕಟ.
ಪುಸ್ತಕ ಪ್ರಾಧಿಕಾರ ಲೇಖಕರ ಚೊಚ್ಚಲ ಕೃತಿಗೆ ನೀಡುವ ಸಹಾಯಧನಕ್ಕೆ `ಸಿಂಗಾರಿತ್ಲು' ನಾಟಕ ಆಯ್ಕೆ.
ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ರಾಜ್ಯಮಟ್ಟದ ಕಾವ್ಯ ಸ್ಪರ್ಧೆಗಳಲ್ಲಿ ಸತತ 1998, 1999, 2000ನೇ ಸಾಲುಗಳಲ್ಲಿ ಬಹುಮಾನ.
ಕನ್ನಡ ಸಾಹಿತ್ಯ ಅಕಾಡೆಮಿ 1998ರಲ್ಲಿ ಪ್ರಕಟಿಸಿದ `ಯುವ ಕಾವ್ಯ'ದಲ್ಲಿ ಕವನ ಸೇರ್ಪಡೆ.
ಕನ್ನಡ ಸಾಹಿತ್ಯ ಅಕಾಡೆಮಿ 1999ರಲ್ಲಿ ಪ್ರಕಟಿಸಿದ `ಯುವ ಕಥೆ 'ಯಲ್ಲಿ `ಸಿಂಗಾರಿತ್ಲು' ಕಥೆಗೆ ಸ್ಥಾನ.
19 ವರ್ಷದೊಳಗಿನ ಯುವ ಕವಿಗಳಿಗೆ ಹೊಸದಿಲ್ಲಿಯ `ಪೊಯೆಟ್ರಿ ಸೊಸೈಟಿ ಆಫ್ ಇಂಡಿಯಾ' ಸಂಸ್ಥೆ 1994ರಲ್ಲಿ ಮೈಸೂರಿನಲ್ಲಿ ನಡೆಸಿದ ಕಾವ್ಯ ಕಮ್ಮಟಕ್ಕೆ ಆಯ್ಕೆ. ಇದೇ ಸಂಸ್ಥೆ ಹೊರತಂದ `ಹದಿ ಹೆಜ್ಜೆ' ಎಂಬ ಕನ್ನಡ ಮತ್ತು ಇಂಗ್ಲಿಷ್ ಕವನ ಸಂಕಲನಗಳಲ್ಲಿ ಕವನಗಳು ಸೇರಿವೆ.
ಬೆಂಗಳೂರು ಆಕಾಶವಾಣಿಯಿಂದ ಕವನಗಳ ಪ್ರಸಾರ.
ಚಂದ್ರಶೇಖರ ಪಾಟೀಲರ `ಸಂಕ್ರಮಣ 'ದ ವಾರ್ಷಿಕ ಚುಟುಕು ಕವನ ಸ್ಪರ್ಧೆಯಲ್ಲಿ ಬಹುಮಾನ.
ಮಠಗಳ ಬಗ್ಗೆ ಸಂದರ್ಶನವನ್ನಾಧರಿಸಿದ `ಮಠ ಕಟ್ಟಿ ನೋಡು ' ಲೇಖನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ 'ನ ಪುಸ್ತಕದಲ್ಲಿ ಸೇರ್ಪಡೆ.
ವಿಕ್ರಾಂತ ಕರ್ನಾಟಕ, ಇಂಡಿಯಾ ಇನೋ ಡಾಟ್ ಕಾಂ, ಟೈಮ್ಸ್ ಆಫ್ ಇಂಡಿಯಾದ ಇಂಟರ್ನೆಟ್, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಕನ್ನಡಪ್ರಭ, ವಿಜಯ ಕರ್ನಾಟಕ, ಪ್ರಜಾಪ್ರಗತಿ, ಸಂಕ್ರಮಣ, ತರಂಗ, ಮಲ್ಲಿಗೆ ಪತ್ರಿಕೆಗಳಲ್ಲಿ ಕವನ, ಲೇಖನಗಳು ಪ್ರಕಟಗೊಂಡಿವೆ.